'ಗೆಲುವು ನಿಶ್ಚಿತ': 12ನೇ ತರಗತಿ ವಿದ್ಯಾರ್ಥಿಗಳಿಗೆ 'ದಳಪತಿ' ವಿಜಯ್ ಶುಭ ಹಾರೈಕೆ; ಇದರಲ್ಲಿದೆಯೇ ರಾಜಕೀಯ ಸಂದೇಶ?

'ಗೆಲುವು ನಿಶ್ಚಿತ': 12ನೇ ತರಗತಿ ವಿದ್ಯಾರ್ಥಿಗಳಿಗೆ 'ದಳಪತಿ' ವಿಜಯ್ ಶುಭ ಹಾರೈಕೆ; ಇದರಲ್ಲಿದೆಯೇ ರಾಜಕೀಯ ಸಂದೇಶ?

Kannada News Now

Kannada News Now

56m

Loading...

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ವಿಚಾರವಾಗಿ ರಾಜ್ಯಪಾಲರೊಂದಿಗೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ, ನಟ ಹಾಗೂ ಟಿವಿಪಿ (TVK) ಅಧ್ಯಕ್ಷ ವಿಜಯ್ ಅವರು 12ನೇ ತರಗತಿ ಫಲಿತಾಂಶದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಶುಭ ಕೋರಿದ್ದಾರೆ. "ಗೆಲುವು ನಿಶ್ಚಿತ" (Success is Certain) ಎನ್ನುವ ಅವರ ಮಾತುಗಳು ಈಗ ಅಭಿಮಾನಿಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಫಲಿತಾಂಶ ಪ್ರಕಟವಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಜಯ್, "ಪರೀಕ್ಷೆಯಲ್ಲಿ ಸಾಧನೆ ಮಾಡಿದ ನನ್ನ ಎಳೆಯ ಸ್ನೇಹಿತರಿಗೆ ಅಭಿನಂದನೆಗಳು. ನೆನಪಿರಲಿ, ಸೋಲು ಎಂಬುದು ಕೇವಲ ಒಂದು ತಾತ್ಕಾಲಿಕ ಅಡೆತಡೆ ಮಾತ್ರ. ನಿಮ್ಮ ಗುರಿ ಸ್ಪಷ್ಟವಾಗಿದ್ದರೆ ಗೆಲುವು ನಿಶ್ಚಿತ," ಎಂದು ಬರೆದುಕೊಂಡಿದ್ದಾರೆ.

ರಾಜ್ಯದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡದ ಹಿನ್ನೆಲೆಯಲ್ಲಿ ವಿಜಯ್ ಅವರ ಈ 'ಪಾಸಿಟಿವ್' ಸಂದೇಶವು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ತಮ್ಮ ಪಕ್ಷದ ಕಾರ್ಯಕರ್ತರಿಗೂ ನೀಡಿದ ಭರವಸೆ ಎಂದು ವಿಶ್ಲೇಷಿಸಲಾಗುತ್ತಿದೆ.

"ನಮ್ಮ ನಾಯಕ ಸೋಲ ಒಪ್ಪುವವರಲ್ಲ, ಅವರು ವಿದ್ಯಾರ್ಥಿಗಳ ಮೂಲಕ ವ್ಯವಸ್ಥೆಗೆ ಸಂದೇಶ ರವಾನಿಸಿದ್ದಾರೆ" ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now