ಶಿವಮೊಗ್ಗ: ಸೊರಬದ ಉಳವಿಯ ಕೆರೆಯ ಬಳಿಯಲ್ಲಿ ಟಾಟಾ ಏಸ್-ಟಿಂಬರ್ ಲಾರಿ ನಡುವೆ ಅಪಘಾತ: ಯುವಕನಿಗೆ ಗಂಭೀರ ಗಾಯ

ಶಿವಮೊಗ್ಗ: ಸೊರಬದ ಉಳವಿಯ ಕೆರೆಯ ಬಳಿಯಲ್ಲಿ ಟಾಟಾ ಏಸ್-ಟಿಂಬರ್ ಲಾರಿ ನಡುವೆ ಅಪಘಾತ: ಯುವಕನಿಗೆ ಗಂಭೀರ ಗಾಯ

Kannada News Now

Kannada News Now

1hr

Loading...

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಮಾರಿಕಾಂಬಾ ದೇವಸ್ಥಾನದ ತಿರುವಿನಲ್ಲಿ ಮರಗಳನ್ನು ತುಂಬಿದ್ದ ಲಾರಿ ಹಾಗೂ ಟಾಟಾ ಏಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಟಾಟಾ ಏಸ್ ನಲ್ಲಿದ್ದಂತ ಯುವಕನಿಗೆ ಗಂಭೀರ ಗಾಯವಾಗಿರೋದಾಗಿ ತಿಳಿದು ಬಂದಿದೆ.

ಶಿರಾಳಕೊಪ್ಪದ ಕಡೆಯಿಂದ ಮರದ ದಿಮ್ಮಿಗಳನ್ನು ತುಂಬಿಕೊಂಡು ಸಾಗರದ ಕಡೆಗೆ ತೆರಳುತ್ತಿದ್ದಂತ ಲಾರಿಯೊಂದು ಉಳವಿಯ ಕೆರೆ ಬಳಿಯಲ್ಲಿನ ಮಾರಿಕಾಂಬ ದೇವಸ್ಥಾನದ ತಿರುವಿನಲ್ಲಿ ಉಳವಿ ಕಡೆಯಿಂದ ತೆರಳುತ್ತಿದ್ದಂತ ಟಾಟಾ ಏಸ್ ಗೆ ಡಿಕ್ಕಿಯಾಗಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಟಾಟಾ ಏಸ್ ಮುಂಭಾಗ ನಜ್ಜುಗುಜ್ಜಾಗಿದೆ.

ಲಾರಿ ಡಿಕ್ಕಿಯಾಗಿ ಉಂಟಾದಂತ ಅಪಘಾತದಲ್ಲಿ ಉಳವಿಯ ಐಡಿಯಲ್ ಶಾಮಿಯಾನದ ಆಫ್ರಿದ್(28) ಎಂಬ ಯುವಕನ ಕಾಲುಗಳು ಮುರಿದಿವೆ ಎಂಬುದಾಗಿ ಹೇಳಲಾಗುತ್ತಿದೆ. ಸಾಗರದಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ, ಶಿವಮೊಗ್ಗಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ದಿರುವುದಾಗಿ ಹೇಳಲಾಗುತ್ತಿದೆ.

ಈ ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಸೊರಬ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನವೀನ್ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now