Shocking: ದೆಹಲಿ ದೇವಾಲಯ, ಮಿಲಿಟರಿ ಕ್ಯಾಂಪ್ ಮೇಲೆ ದಾಳಿಗೆ ISI ಸಂಚು: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

Shocking: ದೆಹಲಿ ದೇವಾಲಯ, ಮಿಲಿಟರಿ ಕ್ಯಾಂಪ್ ಮೇಲೆ ದಾಳಿಗೆ ISI ಸಂಚು: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

Kannada News Now

Kannada News Now

49m

Loading...

ವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ರಕ್ತಪಾತ ಹರಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ನಡೆಸಿದ್ದ ಸಂಚನ್ನು ದೆಹಲಿ ಪೊಲೀಸರು ವಿಫಲಗೊಳಿಸಿದ್ದಾರೆ. ಈ ಭಯೋತ್ಪಾದಕ ಮಾಡ್ಯೂಲ್ ದೆಹಲಿಯ ಐತಿಹಾಸಿಕ ದೇವಾಲಯ, ಜನನಿಬಿಡ ಧಾಬಾ ಮತ್ತು ಹರಿಯಾಣದ ಮಿಲಿಟರಿ ಕ್ಯಾಂಪ್ ಮೇಲೆ ದಾಳಿ ನಡೆಸಲು ಯೋಜಿಸಿತ್ತು ಎಂಬ ಆಘಾತಕಾರಿ ವಿಷಯ ತನಿಖೆಯಿಂದ ತಿಳಿದುಬಂದಿದೆ.

ದೆಹಲಿಯ ಪ್ರಸಿದ್ಧ ದೇವಸ್ಥಾನ, ದೆಹಲಿ-ಸೋನಿಪತ್ ಹೆದ್ದಾರಿಯಲ್ಲಿರುವ ಧಾಬಾ ಮತ್ತು ಹರಿಯಾಣದ ಹಿಸಾರ್‌ನಲ್ಲಿರುವ ಮಿಲಿಟರಿ ಕ್ಯಾಂಪ್ ಮೇಲೆ ಗ್ರೆನೇಡ್ ದಾಳಿ ನಡೆಸಲು ಈ ತಂಡ ಸಿದ್ಧತೆ ನಡೆಸಿತ್ತು.

ಈ ಸಂಚಿನ ಹಿಂದೆ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ಶಹಜಾದ್ ಭಟ್ಟಿ ಎಂಬಾತನ ಕೈವಾಡವಿದೆ ಎಂದು ಶಂಕಿಸಲಾಗಿದೆ. ಈತ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಸಂಪರ್ಕಿಸಿ ದಾಳಿಗೆ ಪ್ರೇರೇಪಿಸುತ್ತಿದ್ದ ಎನ್ನಲಾಗಿದೆ.

ಬಂಧಿತ ಆರೋಪಿಗಳು ಈಗಾಗಲೇ ಮಿಲಿಟರಿ ಕ್ಯಾಂಪ್ ಮತ್ತು ಆಯಕಟ್ಟಿನ ಸ್ಥಳಗಳ ಸುತ್ತಮುತ್ತ ಸಂಚರಿಸಿ, ಅಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ಕಲೆಹಾಕಿದ್ದರು .

Dailyhunt
Disclaimer: This content has not been generated, created or edited by Dailyhunt. Publisher: Kannada News Now