ಬೆಂಗಳೂರು ಆಟೋ ಚಾಲಕನ ಕ್ರಿಯೇಟಿವ್ ಐಡಿಯಾ ವೈರಲ್: ಆದರೆ UPI ಇಲ್ಲ ನಗದು ಮಾತ್ರ, ವೈರಲ್ ವಿಡಿಯೋ

ಬೆಂಗಳೂರು ಆಟೋ ಚಾಲಕನ ಕ್ರಿಯೇಟಿವ್ ಐಡಿಯಾ ವೈರಲ್: ಆದರೆ UPI ಇಲ್ಲ ನಗದು ಮಾತ್ರ, ವೈರಲ್ ವಿಡಿಯೋ

Oneindia

Oneindia

49m

Loading...

Bengaluru: ಬೆಂಗಳೂರಿನ ಆಟೋ ಚಾಲಕರೊಬ್ಬರು ತಮ್ಮ ಆಟೋದಲ್ಲಿ ವಿಶೇಷ ಸೇವೆಯನ್ನು ನೀಡಿದ್ದು, ಈ ವಿಷಯವು ಇದೀಗ ಇಂಟರ್‌ನೆಟ್‌ನಲ್ಲಿ ಭಾರೀ ಟ್ರೆಂಡ್ ಕ್ರಿಯೇಟ್ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಈಚೆಗೆ ಮಳೆಯಾದರೂ ಬಿಸಿಲು ಹೆಚ್ಚಾಗಿದೆ.

ಇದೀಗ ಬೆಂಗಳೂರು ಆಟೋ ಚಾಲಕರೊಬ್ಬರ ಕ್ರಿಯೇಟಿವ್ ಐಡಿಯಾ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಬೆಂಗಳೂರು ನಗರದಲ್ಲಿ ಆಟೋ ಚಾಲಕ ಮಾಡಿದ ಜಾದು ಏನು ಎನ್ನುವ ವಿವರ ಈ ಲೇಖನದಲ್ಲಿದೆ.

ಬೆಂಗಳೂರಿನಲ್ಲಿ ಈ ಬಾರಿಯ ಬೇಸಿಗೆಯು ತೀವ್ರವಾಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಬಿಸಿಲ ತೀವ್ರತೆಯು ಹೆಚ್ಚಾಗಿದೆ. ಇದೀಗ ಆಟೋದಲ್ಲಿ ಬೇಸಿಗೆಯ ಬಿಸಿಲನ್ನು ತಡೆದುಕೊಳ್ಳಲು ಸಣ್ಣ ಪರದೆಗಳನ್ನು ಹಾಗೂ ಫ್ಯಾನ್ ಅಳವಡಿಸಲಾಗಿದೆ. ಅಲ್ಲದೆ ಆಟೋದ ಚಾಲಕ ತಮ್ಮ ಸೀಟಿನ ಮುಂಭಾಗದಲ್ಲಿ ಕಾಂಪ್ಯಾಕ್ಟ್‌ ಟಿವಿ ಪರದೆಯನ್ನು ಅಳವಡಿಸಲಾಗಿದೆ. ಆಟೋ ಚಾಲಕ ತಮ್ಮ ಆಟೋದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಜಾಗದಲ್ಲಿ ಚಾರ್ಜಿಂಗ್ ಪಾಯಿಂಟ್ ಹಾಗೂ ಪುಸ್ತಕಗಳನ್ನು ಸಹ ಇರಿಸಿದ್ದಾರೆ.

ಬೆಂಗಳೂರಿನಲ್ಲಿ ದಿನನಿತ್ಯ ಓಡಾಡುವ ಆಟೋಗಳಿಗಿಂತಲೂ ಈ ಆಟೋ ಭಿನ್ನವಾಗಿದೆ ಎಂದು ಪ್ರಯಾಣಿಕರೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ. ಈ ಆಟೋರಿಕ್ಷಾ ಸವಾರಿಯು ಚಕ್ರಗಳ ಮೇಲೆ ಮಿನಿ ಲೌಂಜ್‌ನಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ. ಆಟೋ ಚಾಲಕನ ಸೃಜನಶೀಲತೆಗೆ ಜನ ಮೆಚ್ಚುಗೆ ಸೂಚಿಸಿದ್ದಾರೆ.

ಪೂರ್ಣಾ ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಶೇಷ ಆಟೋದಲ್ಲಿ ಪ್ರಯಾಣ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಆಟೋದ ಒಳಭಾಗದಲ್ಲಿನ ವಿನ್ಯಾಸವು ಆಕರ್ಷಕವಾಗಿದೆ. ಈ ಮಾದರಿಯ ಆಟೋ ವಿನ್ಯಾಸಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ನೆಟ್ಟಿಗರು ಹೇಳಿದ್ದೇನು

ಇನ್ನು ವೈರಲ್ ಆಟೋ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಆಟೋದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಎರಡೂ ಭಾಗದಲ್ಲೂ ಪರದೆಗಳನ್ನು ಅಳವಡಿಸಲಾಗಿದೆ. ಅಲ್ಲದೆ ಓದುವುದಕ್ಕೆ ಪುಸ್ತಕಗಳು, ಫ್ಯಾನ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯೂ ಸಹ ಇದೆ. ಆದರೆ ಕೆಲವರು ಈ ಆಟೋದಲ್ಲಿನ ಸಣ್ಣದೊಂದು ಲೋಪವನ್ನು ಸಹ ಕಂಡು ಹಿಡಿದಿದ್ದಾರೆ. ಎಲ್ಲವೂ ಸರಿ ಇದೆ. ಆದರೆ, "UPI ಇಲ್ಲ ನಗದು ಮಾತ್ರ" ಎಂಬ ಫಲಕ ನೋಡುವವರೆಗೂ ಎಲ್ಲವೂ ಚೆನ್ನಾಗಿತ್ತು ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

Loading Instagram...
Dailyhunt
Disclaimer: This content has not been generated, created or edited by Dailyhunt. Publisher: OneIndia Kannada