ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲಾ ಕಡೆಯಲ್ಲೂ ಕಳೆದ ಬಾರಿಗಿಂತ ಹೆಚ್ಚಿನ ಮತದಾನವಾಗಿದ್ದು, ಮಹಿಳಾ ಮತದಾರರ ಸಂಖ್ಯೆ ಕೂಡ ಜಾಸ್ತಿಯಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಶೇ 93.71ರಷ್ಟು ಮತದಾನವಾಗಿದೆ. ಒಟ್ಟು 6.38 ಕೋಟಿ ಜನರು ಮತ ಚಲಾಯಿಸಿದ್ದಾರೆ.
ಶೇ 93.8ರಷ್ಟು ಮಹಿಳಾ ಮತದಾರರು ಹಾಗೂ ಶೇ 92.06 ಪುರುಷ ಮತದಾರರು ಮತ ಹಾಕಿದ್ದಾರೆ.
ತಮಿಳುನಾಡಿನಲ್ಲಿ ಶೇ 85.01ರಷ್ಟು ಮತದಾನವಾಗಿದೆ. ಒಟ್ಟು 4.8 ಕೋಟಿ ಜನರು ಮತ ಚಲಾಯಿಸಿದ್ದಾರೆ. ಅದರಲ್ಲಿ ಮಹಿಳಾ ಮತದಾರರ ಪ್ರಮಾಣವು ಶೇ 86.2 ಹಾಗೂ ಪುರುಷ ಮತದಾರರ ಪ್ರಮಾಣವು ಶೇ 83.77 ಇದೆ.
ಅಸ್ಸಾಂನಲ್ಲಿ ಶೇ 85.74ರಷ್ಟು ಮತದಾನವಾಗಿದೆ. ಒಟ್ಟು 2.15 ಕೋಟಿ ಜನರು ಮತ ಹಾಕಿದ್ದಾರೆ. ಅದರಲ್ಲಿ ಶೇ 86.53ರಷ್ಟು ಮಹಿಳೆಯರು ಮತ್ತು ಶೇ 84.95 ಪುರುಷ ಮತದಾರರು ಮತ ಚಲಾಯಿಸಿದ್ದಾರೆ.
ಕೇರಳದಲ್ಲಿ ಶೇ 78.11ರಷ್ಟು ಮತದಾನವಾಗಿದೆ. ಒಟ್ಟು 2.12 ಕೋಟಿ ಜನರು ಮತ ಚಲಾಯಿಸಿದ್ದಾರೆ. ಶೇ 81.17 ಮಹಿಳೆಯರು ಮತ್ತು ಶೇ 74.9 ಪುರುಷರು ಮತ ಹಾಕಿದ್ದಾರೆ.
ಪದುಚೆರಿಯಲ್ಲಿ 8.5 ಲಕ್ಷ ಮತ ಹಾಕಿದ್ದು, ಶೇ 89.82 ಮತದಾನವಾಗಿದೆ. ಅದರಲ್ಲಿ ಮಹಿಳಾ ಮತದಾರರ ಸಂಖ್ಯೆ ಶೇ 91.39ರಷ್ಟಿದೆ.
ತಮಿಳುನಾಡಿನಲ್ಲಿ 23, ಪಶ್ಚಿಮ ಬಂಗಾಳದಲ್ಲಿ 37, ಕೇರಳದಲ್ಲಿ 11 ಮಹಿಳಾ ಸ್ಪರ್ಧಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

