ತಮಿಳುನಾಡಿನ ಹೊಸ ಸರ್ಕಾರದೊಂದಿಗೆ ನಾವು ಕೈ ಜೋಡಿಸುವುದಿಲ್ಲ: ಬಿಜೆಪಿ

ತಮಿಳುನಾಡಿನ ಹೊಸ ಸರ್ಕಾರದೊಂದಿಗೆ ನಾವು ಕೈ ಜೋಡಿಸುವುದಿಲ್ಲ: ಬಿಜೆಪಿ

ಪ್ರಜಾವಾಣಿ

ಪ್ರಜಾವಾಣಿ

49m

Loading...

ಚೆನ್ನೈ: ತಮಿಳುನಾಡಿನ ಜನಾದೇಶವನ್ನು ನಾವು ಪ್ರಾಮಾಣಿಕವಾಗಿ ಗೌರವಿಸುತ್ತೇವೆ. ಹಾಗಾಗಿ, ಹೊಸ ಸರ್ಕಾರದೊಂದಿಗೆ ನಾವು ಕೈ ಜೋಡಿಸುವುದಿಲ್ಲ ಎಂದು ಬಿಜೆಪಿ ಪಕ್ಷವು ಶುಕ್ರವಾರ(ಮೇ 8) ತಿಳಿಸಿದೆ.

ಸರ್ಕಾರ ರಚಿಸುವ ಯಾವುದೇ ಚಟುವಟಿಕೆ ಅಥವಾ ಯಾವುದೇ ಪಕ್ಷಗಳ ಅಂತಹ ಪ್ರಯತ್ನಗಳಿಗೆ ನಾವು ಬೆಂಬಲ ನೀಡುವುದಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಹೇಳಿದ್ದಾರೆ.

ತಮಿಳುನಾಡಿನ ಜನರ ಕಲ್ಯಾಣ ಮತ್ತು ಪ್ರಗತಿಗಾಗಿ ನಾವು ಚುನಾವಣೆಯಲ್ಲಿ ಸ್ಪರ್ಧಿಸಿದ್ದೆವು. ನಾವು ಅದಕ್ಕೆ ಬದ್ಧವಾಗಿದ್ದೇವೆ. ಚುನಾವಣಾ ಫಲಿತಾಂಶವನ್ನು ನಾವು ಸ್ವೀಕರಿಸಿದ್ದು, ‌ನಾವು ಸರ್ಕಾರ ರಚಿಸಲು ಯಾವುದೇ ಜನಾದೇಶವನ್ನು ನೀಡಿಲ್ಲ. ಹಾಗಾಗಿ, ಅದರಿಂದ ದೂರ ಉಳಿದಿದ್ದೇವೆ ಎಂದು ಹೇಳಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಕೇವಲ ಒಂದು ಕ್ಷೇತ್ರದಲ್ಲಿ ಜಯ ಗಳಿಸಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Prajavani

Comments

1
Loading comments...